ಬಿಸಿಲ ಝಳ: ಸವಾರರ ನೆತ್ತಿ ಸುಡುತ್ತಿದೆ ಹೆಲ್ಮೆಟ್ ಕಾರ್ಯಾಚರಣೆ!ಗುಣಮಟ್ಟದ, ಐಎಸ್ಐ ಮಾರ್ಕ್ ಹೆಲ್ಮೆಟ್ ಧರಿಸಲು ದ್ವಿಚಕ್ರ ವಾಹನ ಸವಾರರಿಗೆ ಹೇಳುವ ಭರದಲ್ಲಿ ಮಹಿಳೆಯರು, ವಿದ್ಯಾರ್ಥಿನಿಯರು, ಹಿರಿಯ ನಾಗರೀಕರೆನ್ನದೇ ಹಾಫ್ ಹೆಲ್ಮೆಟ್ಗಳನ್ನು ಕಾಲಲ್ಲಿ ಹಾಕಿ, ತುಳಿಯುವ ಮೂಲಕ ಸಂಚಾರ ಪೊಲೀಸ್ ಠಾಣೆ ಮಹಿಳಾ ಅಧಿಕಾರಿಯೊಬ್ಬರು ಇಲಾಖೆ ಬಗ್ಗೆಯೇ ಜನರು ಬೇಸರಪಡುವಂತೆ ವರ್ತಿಸುತ್ತಿದ್ದಾರೆ. ಇದು ಈಗ ಜನರ ಕೆಂಗಣ್ಣಿಗೆ ಗುರಿಯಾಗಿದೆ.