ಸರ್ಕಾರದಿಂದಲೇ ಹರ್ಡೆಕರ್ ಮಂಜಪ್ಪ ಜಯಂತಿ ಆಚರಿಸಬೇಕುಪ್ರತಿವರ್ಷ ಶರಣರು, ಮಹಾತ್ಮರು, ದಾರ್ಶನಿಕರ ಜಯಂತಿಯನ್ನು ನಮ್ಮ ಸರ್ಕಾರ ಆಚರಣೆ ಮಾಡುತ್ತಿದೆ. ಅದೇ ರೀತಿಯಾಗಿ ಕರ್ನಾಟಕದ ಗಾಂಧಿ, ಸ್ವಾತಂತ್ರ್ಯ ಹೋರಾಟಗಾರಗಿ, ಪತ್ರಕರ್ತ, ಸರಳ ಜೀವನ ನಡೆಸಿದಂತಹ ಹರ್ಡೆಕರ್ ಮಂಜಪ್ಪ ಅವರ ಜಯಂತಿಯನ್ನು ಸರ್ಕಾರ ಆಚರಣೆ ಮಾಡಬೇಕು ಎಂಬ ಹಕ್ಕೊತ್ತಾಯ ನಾವೆಲ್ಲರೂ ನಿಯೋಗದ ಮುಖಾಂತರ ಮುಖ್ಯಮಂತಿ ಅವರಿಗೆ ಮನವಿ ಮಾಡಿ ಇಡೀ ರಾಜ್ಯಾದ್ಯಂತ ಆಚರಣೆ ಮಾಡುವಂತಾಗಲು ಪ್ರಯತ್ನ ಮಾಡೋಣ ಎಂದು ವಿರಕ್ತ ಮಠದ ಡಾ.ಬಸವಪ್ರಭು ಸ್ವಾಮೀಜಿ ನುಡಿದಿದ್ದಾರೆ.