ತಂತ್ರಜ್ಞಾನ ಪರಿಣಾಮ ಹ್ಯಾಕರ್ಗಳಿಂದ ಮೊಬೈಲ್ಗಳೂ ಸುರಕ್ಷಿತವಲ್ಲದುಬಾರಿ ಮೊಬೈಲ್ಗಳು, ಐಫೋನ್ಗಳನ್ನು ಹ್ಯಾಕ್ ಮಾಡಲು ಸಾಧ್ಯವಿಲ್ಲ ಎಂದು ಬಹುತೇಕರು ಭಾವಿಸಿದ್ದಾರೆ. ಆದರೆ, ಅಂಥ ಮೊಬೈಲ್ಗಳನ್ನೂ ಹ್ಯಾಕ್ ಮಾಡಬಹುದು. ಮುಂದುವರಿದ ತಂತ್ರಜ್ಞಾನದಲ್ಲಿ ಪ್ರತಿಯೊಂದು ಸ್ಮಾರ್ಟ್ ಉಪಕರಣಗಳನ್ನು ಹ್ಯಾಕ್ ಮಾಡಬಹುದು ಎಂದು ಬೆಂಗಳೂರಿನ ಸೈಬರ್ ಭದ್ರತಾ ನಿರ್ವಹಣಾ ಸಲಹೆಗಾರ ಎ.ಎಸ್.ಯಶವಂತ ಅಭಿಪ್ರಾಯಪಟ್ಟಿದ್ದಾರೆ.