ಸಮಾನತೆಗೆ ಆರಂಭವಾದ ಸಾಹಿತ್ಯವೇ ತತ್ವಪದ: ಕಾ.ತ.ಚಿಕ್ಕಣ್ಣಅನಾದಿಯಿಂದಲೂ ಸಮಾಜದಲ್ಲಿ ಬೇರೂರಿದ್ದ ಅಸಮಾನತೆ, ಮೂಢನಂಬಿಕೆ, ಕಂದಾಚಾರಗಳನ್ನು ಹೋಗಲಾಡಿಸಿ, ಸಮಾನತೆಯನ್ನು ತರಲು ತತ್ವಜ್ಞಾನಿಗಳು ಕಾಲಕಾಲಕ್ಕೆ ತಮ್ಮ ಅನುಭವದ ಮೂಲಕ ಪದಗಳನ್ನು ಕಟ್ಟಿ, ಹೇಳಿ ಜನರನ್ನು ಜಾಗೃತರನ್ನಾಗಿಸುವ ಕೆಲಸ ಮಾಡಿಕೊಂಡೇ ಬಂದಿದ್ದಾರೆ ಎಂದು ಸಂತ ಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಅಧ್ಯಕ್ಷ ಕಾ.ತ.ಚಿಕ್ಕಣ್ಣ ತಿಳಿಸಿದರು.