ಸಿಲಬಸ್ ಗೊಂದಲದಲ್ಲಿ ಪಿಡಬ್ಲ್ಯುಡಿ ಸೇವಾನಿರತ ಅಭ್ಯರ್ಥಿಗಳು!ಲೋಕೋಪಯೋಗಿ ಇಲಾಖೆಯಲ್ಲಿ ಖಾಲಿಯಿರುವ ಉಳಿಕೆ ಮೂಲವೃಂದದ ಸಹಾಯಕ ಕಾರ್ಯಪಾಲಕ ಅಭಿಯಂತರ (ಗ್ರೇಡ್-1) ಗ್ರೂಪ್ ಎ ವೃಂದದ 30 ಹುದ್ದೆಗಳ ನೇಮಕಾತಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿರುವ ಕರ್ನಾಟಕ ಲೋಕಸೇವಾ ಆಯೋಗ, ಸೇವಾನಿರತ ಅಭ್ಯರ್ಥಿಗಳಿಗೆ ಎರಡೆರಡು ಸಿಲಬಸ್ಗಳ ನೀಡಿ, ಕಾಟಾಚಾರಕ್ಕೆ ಪರೀಕ್ಷೆ ನಡೆಸಲು ಸಜ್ಜಾಗಿದೆ. ಇದರ ವಿರುದ್ಧ ಈಗ ಅಭ್ಯರ್ಥಿಗಳು ಕರ್ನಾಟಕ ಆಡಳಿತಾತ್ಮಕ ನ್ಯಾಯ ಮಂಡಳಿ (ಕೆಎಟಿ) ಮೆಟ್ಟಿಲೇರಿದ್ದಾರೆ.