ತಾತ್ಕಾಲಿಕ ಬಸ್ ನಿಲ್ದಾಣ ತೆರವಿಗೆ ಅಸಡ್ಡೆ: ದಿನೇಶ ಶೆಟ್ಟಿ ಗರಂಹೊಸದಾಗಿ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ, ಖಾಸಗಿ ಬಸ್ ನಿಲ್ದಾಣ ನಿರ್ಮಾಣದ ಸಲುವಾಗಿ ಹೈಸ್ಕೂಲ್ ಮೈದಾನದಲ್ಲಿ ತಾತ್ಕಾಲಿಕವಾಗಿ ನಿರ್ಮಿಸಿದ್ದ ಬಸ್ ನಿಲ್ದಾಣಗಳನ್ನು ಅಧಿಕಾರಿಗಳ ತೆರವುಗಳಿಸಿಲ್ಲ. ಈ ದಿವ್ಯ ನಿರ್ಲಕ್ಷ್ಯ ಖಂಡಿಸಿ ಜಿಲ್ಲಾ ಕ್ರೀಡಾಪಟುಗಳ ಸಂಘದ ಅಧ್ಯಕ್ಷ ದಿನೇಶ ಕೆ. ಶೆಟ್ಟಿ ಬುಧವಾರ ಸ್ವತಃ ತಾವೇ ಜೆಸಿಬಿ ಚಲಾಯಿಸುವ ಮೂಲಕ ತಾತ್ಕಾಲಿಕ ನಿಲ್ದಾಣಗಳ ತೆರವಿಗೆ ಚಾಲನೆ ನೀಡಿದ್ದಾರೆ.