ನೆಲದ ಮೇಲೆಲ್ಲ, ನೀರಿನಲ್ಲಿ ತೇಲುತ್ತಾ ಯೋಗಾಸನ!ತುಂಬಿದ ಬಾವಿಯಿಂದ ನೀರಿಗೆ ಜಿಗಿಯುತ್ತಿರುವ ಈಜುಗಾರರು, ಮಕ್ಕಳು, ಯುವಕರು, ವೃದ್ಧರ ಸಮೇತ ಎಲ್ಲ ವಯಸ್ಕರಿಂದಲೂ ನೀರಿನ ಮಧ್ಯೆಯೇ ತೇಲುತ್ತ ವಿವಿಧ ಸಾಹಸಮಯ ಆಸನಗಳು, ನೆಲದ ಮೇಲೆ ಮಾಡುವ ರೀತಿಯಲ್ಲಿಯೇ ನೀರಿನಲ್ಲಿಯೂ ಯೋಗದ ವಿವಿಧ ಆಸನಗಳ ಪ್ರದರ್ಶನ ನೋಡುಗರ ಮನಕ್ಕೆ ಮುದ ನೀಡಿತು. ಇಲ್ಲಿಯ ಹೊಸಯಲ್ಲಾಪುರದ ಐತಿಹಾಸಿಕ ನುಚ್ಚಂಬ್ಲಿ ಬಾವಿಯಲ್ಲಿ ವಿಶ್ವ ಯೋಗ ದಿನದ ಪ್ರಯುಕ್ತ ನಡೆದ ಜಲ ಯೋಗ ಪ್ರದರ್ಶನವಿದು.