ವರ್ಷಗಳು ಕಳೆದರೂ ಆರಂಭವಾಗದ ಕ್ರೀಡಾಸಂಕೀರ್ಣಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಸೂಚನೆ ಮೇರೆಗೆ ಎನ್ಎಂಡಿಸಿ ಅದಿರು ಕಂಪನಿ ಸಿಎಸ್‌ಆರ್ ನಿಧಿಯಡಿ ₹5 ಕೋಟಿ ವೆಚ್ಚದ ಒಳಾಂಗಣ ಕ್ರೀಡಾ ಸಂಕೀರ್ಣ ನಿರ್ಮಿಸಿದೆ. ಇದರಲ್ಲಿ ಅಥ್ಲೆಟಿಕ್ಸ್, ಟೇಬಲ್ ಟೆನ್ನಿಸ್, ಸ್ನೋಕರ್, ಬ್ಯಾಡ್ಮಿಂಟನ್, ಹಾಕಿ, ಟೆನಿಸ್, ವಾಲಿಬಾಲ್ ಅಂಗಣ, ವಿಶ್ರಾಂತಿ ಗೃಹ ಮತ್ತು ಶೌಚಾಲಯ ಸೇರಿದಂತೆ ಸುವ್ಯವಸ್ಥಿತ ಕಟ್ಟಡ ಇದಾಗಿದೆ.