ಜನಪ್ರಿಯತೆ ಹೆಚ್ಚಿಸಿಕೊಂಡ ವಂದೇ ಭಾರತ್ಆದಾಯ ಸಂಗ್ರಹದಲ್ಲಿ ಸ್ಥಿರತೆ ಕಾಪಾಡಿಕೊಂಡಿರುವ ವಂದೇ ಭಾರತ ಶೇ. 100ಕ್ಕಿಂತ ಅಧಿಕ ಮುಂಗಡ ಟಿಕೆಟ್ ಕಾಯ್ದಿರಿಸುವಿಕೆಯನ್ನು ಕಾಯ್ದುಕೊಂಡಿದೆ. ಉತ್ತಮ ವಾತಾವರಣ, ಸ್ವಚ್ಛತೆ, ಶುಚಿಯಾದ ಊಟ ಮತ್ತು ತ್ವರಿತವಾಗಿ ಗಮ್ಯಸ್ಥಾನ ತಲುಪಿಸಲು ಸಹಕಾರಿಯಾಗಿರುವ ರೈಲು ತನ್ನ ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುತ್ತಿದೆ.