ಸ್ವಚ್ಛತೆಗೆ ಪಾಲಿಕೆಯೊಂದಿಗೆ ಕೈಜೋಡಿಸಿಶಾಲಾ, ಕಾಲೇಜು ಮಕ್ಕಳು ನಾಮಫಲಕ ಹಿಡಿದು, ನಮ್ಮ ಧಾರವಾಡ ಸ್ವಚ್ಛ ಧಾರವಾಡ, ಕಾಪಾಡೋಣ ಕಾಪಾಡೋಣ ಸ್ವಚ್ಛತೆ ಕಾಪಾಡೋಣ ಎಂಬ ಘೋಷ್ಯವಾಕ್ಯವನ್ನು ಕೂಗುತ್ತಾ ನಗರದ ಬೀದಿ ಬೀದಿಗಳಲ್ಲಿ ಸಂಚರಿಸಿ, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು. ಕಲಾವಿದರು ಬೀದಿ ನಾಟಕ, ಜಾನಪದ ಗೀತೆ ಹಾಡುವ ಮೂಲಕ ಸಾರ್ವಜನಿಕರಲ್ಲಿ ಸ್ವಚ್ಛತಾ ಕಾರ್ಯಕ್ಕೆ ಪ್ರೇರಣೆ ನೀಡಿದರು. ಜನರಲ್ಲಿ ಸ್ವಚ್ಛತೆಯ ಮಹತ್ವದ ಅರಿವು ಮೂಡಿಸಿದರು.