ಗೋಮಾಳ ಒತ್ತುವರಿ ತಡೆಯಲು ಸಸಿ ನೆಟ್ಟ ಬಾಡ ಗ್ರಾಮಸ್ಥರುಬಾಡ ಗ್ರಾಮದ 500ಕ್ಕೂ ಹೆಚ್ಚು ಜನರು, ಸುತ್ತಮುತ್ತಲಿನ ಹಳ್ಳಿಯ ಜನರ ಸಹಕಾರ ಪಡೆದುಕೊಂಡು ಗುರುವಾರ ಗುದ್ದಲಿ, ಪಿಕಾಸಿ ಕೈಯಲ್ಲಿ ಹಿಡಿದು ತಮ್ಮೂರಿನ ಗೋಮಾಳಕ್ಕೆ ಹೊಸ ಸ್ಪರ್ಶ ನೀಡಿದ್ದಾರೆ. ಸುಮಾರು 500ಕ್ಕೂ ಹೆಚ್ಚು ಎಕರೆ ಜಮೀನಿದ್ದು ಈ ಪೈಕಿ ಈಗ ಆರುವರೆ ಎಕರೆಯಲ್ಲಿ 25ಕ್ಕೂ ಹೆಚ್ಚು ಬಗೆಯ ಹಣ್ಣು, ಔಷಧಿ ಮತ್ತು ಪರಿಸರ ಸ್ನೇಹಿ ಸಸಿಗಳನ್ನು ನೆಟ್ಟಿದ್ದಾರೆ.