ಗದಗದಲ್ಲಿ ಸಮಾನತೆಯ ರಥಯಾತ್ರೆಗೆ ಭವ್ಯ ಸ್ವಾಗತಅಖಿಲ ಭಾರತ ಸಮಾನತೆ ಮಂದಿರ ಮಹಾಸಭಾದಿಂದ ಅನಿಲ ಪಿ. ಮೆಣಸಿನಕಾಯಿ ನೇತೃತ್ವದಲ್ಲಿ ನಡೆದ ಸಮಾನತೆ ರಥಯಾತ್ರೆ ನಗರದ ರಾಧಾಕೃಷ್ಣ ಕಾಲನಿಗೆ ಆಗಮಿಸಿದಾಗ ಮಹಿಳೆಯರು, ಸಹೋದರಿಯರು, ಗುರು-ಹಿರಿಯರು ರಥ ಯಾತ್ರೆಗೆ ಜಯವಾಗಲಿ ಸಮಾನತೆ ಬುತ್ತಿ ದೇಶಕ್ಕೆಲ್ಲ ಶಕ್ತಿ ಎಂಬ ಘೋಷಣೆ ಕೂಗುತ್ತ ಹೂಮಳೆ ಸುರಿಸಿ ಬರ ಮಾಡಿಕೊಂಡರು.