ಪೇಠಾ ಆಲೂರಲ್ಲಿ ಸಿಡಿಲು ಬಡಿದು ಹಸು ಸಾವುಡಂಬಳ: ಸಮೀಪದ ಪೇಠಾ ಆಲೂರ ಗ್ರಾಮದಲ್ಲಿ ಮಂಗಳವಾರ ಸಂಜೆ ಸಿಡಿಲು ಬಡಿದು ಹಸು ಮೃತಪಟ್ಟಿದೆ.ಭಾರಿ ಗಾಳಿ, ಮಳೆ ಗುಡುಗು, ಸಿಡಿಲು ಪ್ರಾರಂಭವಾಗಿದೆ. 3.15ರ ಸುಮಾರಿಗೆ ಮಲ್ಲಪ್ಪಗೌಡ ಸೋಮನಗೌಡ ಸುಳ್ಳದ ತಮ್ಮ ಜಮೀನಿನಲ್ಲಿ ರಕ್ಷಣೆಗೆಂದು ಹಸುವನ್ನು ಗಿಡಕ್ಕೆ ಕಟ್ಟಿದ್ದರು. ಆಗ ಸಿಡಿಲು ಬಡಿದು ಹಸು ಸ್ಥಳದಲ್ಲಿಯೆ ಮೃತಪಟ್ಟಿದೆ.