ರಂಗಪಂಚಮಿ ಬಣ್ಣದಲ್ಲಿ ಮಿಂದೆದ್ದ ಗದಗ-ಬೆಟಗೇರಿ ಜನಗದಗ-ಬೆಟಗೇರಿ ಅವಳಿ ನಗರದಲ್ಲಿ ಮಂಗಳವಾರ ರಂಗಪಂಚಮಿಯನ್ನು ಸಾರ್ವಜನಿಕರು ಸಡಗರದಿಂದ ಆಚರಿಸಿ, ಬಣ್ಣದೊಕುಳಿಯಲ್ಲಿ ಸಂಭ್ರಮದಿಂದ ಮಿಂದೆದ್ದರು. ನಸುಕಿನ ಜಾವದಲ್ಲಿಯೇ ಕಾಮ ದಹನ ಪೂರ್ಣಗೊಳ್ಳುತ್ತಿದ್ದಂತೆ ಬಣ್ಣಕ್ಕೆ ಅಣಿಯಾದ ಜನರು ಸಂಜೆಯವರೆಗೂ ಪರಸ್ಪರ ಬಣ್ಣ ಎರಚಿ ಖುಷಿ ಪಟ್ಟರು.