ಯೂರಿಯಾಕ್ಕಾಗಿ ರಾತ್ರಿಪೂರ್ತಿ ಅಂಗಡಿಗಳ ಮುಂದೆ ವಾಸ್ತವ್ಯ!ಜಿಲ್ಲೆಯಲ್ಲಿ ಯೂರಿಯಾ ಗೊಬ್ಬರದ ಕೊರತೆ ತೀವ್ರವಾಗಿದ್ದು, ರೈತರು ಪರದಾಡುತ್ತಿದ್ದಾರೆ. ಲಕ್ಷ್ಮೇಶ್ವರ ಪಟ್ಟಣದಲ್ಲಿ ಯೂರಿಯಾ ಗೊಬ್ಬರ ಪಡೆಯಲು ರೈತರು ರಾತ್ರಿಯಿಡೀ ಗೊಬ್ಬರದ ಅಂಗಡಿಗಳ ಮುಂದೆ ವಾಸ್ತವ್ಯ ಹೂಡಿದ್ದಾರೆ. ಚನ್ನಪಟ್ಟಣ, ಮುನಿಯನತಾಂಡೆ ಮತ್ತು ಸುತ್ತಮುತ್ತಲಿನ ರೈತರು ಚಳಿ ಲೆಕ್ಕಿಸದೆ, ರಾತ್ರಿಯೇ ತಮ್ಮ ಟ್ರ್ಯಾಕ್ಟರ್‌ಗಳನ್ನು ಗೊಬ್ಬರದ ಅಂಗಡಿಗಳ ಮುಂದೆ ನಿಲ್ಲಿಸಿ ಸಾಲುಗಟ್ಟಿ ನಿಂತಿದ್ದರು.