ಕಾಪರ್ ಕೇಬಲ್, ಡ್ರಿಪ್‌ಪೈಪ್ ಕಳ್ಳತನ ಮಾಡಿದವರ ಪತ್ತೆಮುಂಡರಗಿ ತಾಲೂಕಿನ ಜಂತ್ಲಿ-ಶಿರೂರ, ಹಿರೇವಡ್ಡಟ್ಟಿ ಭಾಗದ ರೈತರ ಹೊಲದಲ್ಲಿ ಕಳ್ಳತನವಾಗಿದ್ದ ಡ್ರಿಪ್ ಪೈಪ್ ಬಂಡಲ್ ಗಳನ್ನು ಹಾಗೂ ಅತ್ತಿಕಟ್ಟಿ ತಾಂಡಾ ಭಾಗದಲ್ಲಿ ಕಳ್ಳತನವಾಗಿದ್ದ ಗಾಳಿ ವಿದ್ಯುತ್ ಕಂಬದಲ್ಲಿನ ಕಾಪರ್ ಕೇಬಲ್‌ನ್ನು ಪತ್ತೆ ಹಚ್ಚುವಲ್ಲಿ ಮುಂಡರಗಿ ಪೊಲೀಸರು ಯಶಸ್ವಿಯಾಗಿದ್ದು, ಕಳ್ಳತನದಲ್ಲಿ ಭಾಗಿಯಾಗಿದ್ದ 9 ಆರೋಪಿತರ ಪೈಕಿ ನಾಲ್ವರು ಆರೋಪಿತರನ್ನು ವಶಕ್ಕೆ ಪಡೆದುಕೊಂಡು ತನಿಖೆ ಮುಂದುವರೆಸಿದ್ದಾರೆ.