ಆಧುನಿಕ ತಂತ್ರಜ್ಞಾನದಲ್ಲಿ ಜಗತ್ತಿನ ಉಜ್ವಲ ಭವಿಷ್ಯ ಅಡಗಿದೆ-ಡಾ. ಸುರೇಶ ನಾಡಗೌಡರವಿದ್ಯಾರ್ಥಿಗಳು ಸತತ ಅಭ್ಯಾಸ, ಪ್ರಾಮಾಣಿಕ ಪ್ರಯತ್ನ, ಕಠಿಣ ಪರಿಶ್ರಮ, ಶ್ರದ್ಧೆಯ ಫಲವಾಗಿ ಪಡೆದ ಎಂಜಿನಿಯರಿಂಗ್ ಪದವಿ ಉಜ್ವಲ ಭವಿಷ್ಯದ ಮೈಲುಗಲ್ಲಾಗಿದೆ. ಇಂದಿನ ಸ್ಪಧಾತ್ಮಕ ಜಗತ್ತಿನಲ್ಲಿ ನೀವು ಕೈಗೊಳ್ಳುವ ಅಚಲ ನಿರ್ಧಾರ ಮುಖ್ಯವಾಗುತ್ತದೆ ಎಂದು ಗದಗ ಮಹಾತ್ಮಾಗಾಂಧಿ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಕುಲಪತಿ ಡಾ. ಸುರೇಶ ನಾಡಗೌಡರ ಹೇಳಿದರು.