• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • Hassan

Hassan

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಅರಸೀಕೆರೆಯಲ್ಲಿ ಹನುಮ ಜಯಂತಿ ಆಚರಣೆ
ಅರಸೀಕೆರೆ ನಗರದ ಪ್ರಾಚೀನ ಆಂಜನೇಯನ ದೇವಸ್ಥಾನದಲ್ಲಿ ಹನುಮ ಜಯಂತಿ ಪ್ರಯುಕ್ತ ಧಾರ್ಮಿಕ ಆಚರಣೆಗಳು ದೇವಾಲಯದ ಸಂಪ್ರದಾಯದಂತೆ ನಡೆಯಿತು. ಬಾನಂಗಳದಲ್ಲಿ ಸೂರ್ಯ ಉದಯಿಸುತ್ತಿದ್ದಂತೆ ಇತ್ತ ದೇವಾಲಯದಲ್ಲಿ ಧಾರ್ಮಿಕ ಆಚರಣೆಗಳಿಗೆ ಚಾಲನೆ ದೊರೆಯಿತು. ಕ್ಷೀರಾಭೀಷೇಕ , ಜಲಾಭೀಷೇಕ ಹಾಗೂ ಹೀಗೆ ನಾನಾ ಅಭಿಷೇಕಗಳು ನಡೆದವು. ಆಂಜನೇಯನೇಯನ ಮೂಲ ವಿಗ್ರಹಕ್ಕೆ ಮುತ್ತುಗಳಿಂದ ಮಾಡಲಾಗಿದ್ದ ವಿಶೇಷ ಅಲಂಕಾರ ಸೆಳೆಯುವಂತಿತ್ತು.
ಸಾಲಬಾಧೆಯಿಂದ ಬೇಸತ್ತು ಬಾವಿಗೆ ಹಾರಿ ದಂಪತಿ ಆತ್ಮಹತ್ಯೆ
ಸಾಲಬಾಧೆಯಿಂದ ಬೇಸತ್ತ ರೈತ ದಂಪತಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಆಲೂರು ತಾಲೂಕಿನ ಕಟ್ಟೆಗದ್ದೆಯಲ್ಲಿ ಗುರುವಾರ ನಡೆದಿದೆ. ಬ್ಯಾಂಕ್ ಹಾಗೂ ಕೈಸಾಲ ಮಾಡಿಕೊಂಡಿದ್ದರು. ಸತತ ಬೆಳೆನಷ್ಟದಿಂದಾಗಿ ಸಾಲ ತೀರಿಸಲಾಗದೆ ಪರದಾಡುತ್ತಿದ್ದರು. ಸಾಲದ ಹಣ ನೀಡುವಂತೆ ಸಾಲ ಕೊಟ್ಟವರು ಒತ್ತಾಯಿಸುತ್ತಿದ್ದರು. ಇದರಿಂದ ಕಂಗಾಲಾಗಿದ್ದ ಅವರು ಬುಧವಾರ ತಡರಾತ್ರಿ ತಮ್ಮ ಜಮೀನಿನಲ್ಲಿರುವ ತೆರೆದ ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಗ್ರಾಮದ ನಟೇಶ್ (55), ಚಿನ್ನಮ್ಮ (45) ಮೃತ ದಂಪತಿ.
ಆಶಾ ಕಾರ್ಯಕರ್ತೆಯರ ಸಂಘದಿಂದ ಪ್ರತಿಭಟನೆ
ಆಶಾ ಕಾರ್ಯಕರ್ತೆಯರಿಗೆ ಕೇಂದ್ರ ಸರ್ಕಾರದ ಪ್ರೋತ್ಸಾಹಧನ ಮತ್ತು ರಾಜ್ಯ ಸರ್ಕಾರದ ನಿಶ್ಚಿತ ಮಾಸಿಕ ಗೌರವಧನ ಹಾಗೂ ಪ್ರಣಾಳಿಕೆಯ ಭರವಸೆಯ ಮೊತ್ತ ಒಟ್ಟುಗೂಡಿಸಿ ರು. ೧೫,೦೦೦ ಮಾಸಿಕ ನಿಶ್ಚಿತ ಗೌರವಧನ ನೀಡಬೇಕು ಎನ್ನುವ ಬಹುದಿನಗಳ ಬೇಡಿಕೆಯೂ ಸೇರಿದಂತೆ ನಮ್ಮ ನ್ಯಾಯಯುತ ವಿವಿಧ ಬೇಡಿಕೆಗಳನ್ನು ಈಡೇರಿಕೆಗೆ ಬೆಳಗಾವಿ ಅಧಿವೇಶನದಲ್ಲಿ ಘೋಷಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ಆಶಾ ಕಾರ್ಯಕರ್ತೆಯರ ಸಂಘದಿಂದ ಅಪರ ಜಿಲ್ಲಾಧಿಕಾರಿ ಕೆ.ಟಿ. ಶಾಂತಲಾ, ಜಿಪಂ ಸಿಇಒ ಬಿ.ಆರ್‌. ಪೂರ್ಣಿಮಾ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿ ಶಿವಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.
ಸಚಿವ ಗಡ್ಕರಿ ಭೇಟಿ ಮಾಡಿದ ಸಂಸದ ಶ್ರೇಯಸ್‌
ಸಂಸದರಾದ ಶ್ರೇಯಸ್‌ ಎಂ ಪಟೇಲ್‌ ಅವರು ಗುರುವಾರ ನವದೆಹಲಿಯಲ್ಲಿ ಕೇಂದ್ರ ಭೂಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಸಚಿವರಾದ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿ, ಹಾಸನ ಜಿಲ್ಲೆಯ ಅಭಿವೃದ್ಧಿ ಯೋಜನೆಗಳ ಕುರಿತು ಸಮಾಲೋಚನೆ ನಡೆಸಿ, ಭಾರತ ಮಾಲಾ ಯೋಜನೆಯಡಿ ರಸ್ತೆ ಅಭಿವೃದ್ಧಿಯ ಅನುಮೋದನೆಗಾಗಿ ಮನವಿ ಸಲ್ಲಿಸಿದರು. ಪ್ರಸ್ತುತ ಡಿಪಿಆರ್‌ ಹಂತದಲ್ಲಿರುವ ಹಾಸನ ಹಿರಿಯೂರು ಹೆದ್ದಾರಿ ಯೋಜನೆಯನ್ನು ಕ್ಷಿಪ್ರವಾಗಿ ಪೂರ್ಣಗೊಳಿಸುವಂತೆ ಸಚಿವರಲ್ಲಿ ಮನವಿ ಸಲ್ಲಿಸಿದರು.
ನಿಸ್ವಾರ್ಥ ಸೇವೆ ಮಾಡಲು ಲಯನ್ಸ್‌ ಕ್ಲಬ್‌ ಸೂಕ್ತ ವೇದಿಕೆ
ಸೇವೆಯನ್ನೇ ಗುರಿಯಾಗಿಟ್ಟುಕೊಂಡು ಕೆಲಸ ಮಾಡುತ್ತಿರುವ ಸೇವಾಸಂಸ್ಥೆಗಳಲ್ಲಿ ಲಯನ್ಸ್ ಸಂಸ್ಥೆ ಅಗ್ರಸ್ಥಾನದಲ್ಲಿದೆ ಸೇವೆ ಮಾಡುವ ಮನೋಭಾವ ಇರುವವರು ಮಾತ್ರ ಲಯನ್ಸ್ ಸಂಸ್ಥೆಗೆ ಸೇರಬಹುದು. ಇದರಿಂದ ಲಾಭ ಮಾಡಬಹುದು ಎಂಬ ಕಲ್ಪನೆಯಿಂದ ಯಾರೂ ಈ ಸಂಸ್ಥೆಗೆ ಬಂದವರಲ್ಲ. ಈ ಜಿಲ್ಲೆಗೆ ಹಾಗೂ ತಾಲೂಕಿಗೆ ಏನಾದರೂ ತಮ್ಮ ಕೊಡುಗೆ ನೀಡಬೆಕ್ಕೆನ್ನುವ ಆತ್ಮಭಿಮಾನ ಹೊಂದಿರುವವರು ಇಂತಹ ಕಾರ್ಯಕ್ಕೆ ಮುಂದಾಗುತ್ತಾರೆ ಎಂದು ತಿಳಿಸಿ ನಾವು ಮಾಡಿದ ಸಹಾಯ ಅನೇಕ ಕಾರ್ಯಗಳಿಗೆ ಉಪಯೋಗವಾಗಲಿ ಈ ಸಂಸ್ಥೆ ಇನ್ನೂ ಎತ್ತರಕ್ಕೆ ಬೆಳೆದು ಸಮಾಜಮುಖಿ ಕೆಲಸಗಳಿಗೆ ಉಪಯೋಗವಾಗಲಿ ಎಂದು ರಘು ಪಾಳ್ಯ ಹೇಳಿದರು.
ನಡುರಸ್ತೆಯಲ್ಲಿ ಒಂಟಿ ಕಾಡಾನೆ ಓಡಾಟ
ಸಕಲೇಶಪುರದಿಂದ ಅರೇಹಳ್ಳಿಗೆ ಬರುತ್ತಿದ್ದ ಬೈಕ್ ಸವಾರರು ರಸ್ತೆಯನ್ನು ದಾಟುತ್ತಿದ್ದ ಕಾಡಾನೆಯನ್ನು ಕಂಡು ದೂರದಲ್ಲಿಯೇ ಬೈಕ್ ನಿಲ್ಲಿಸಿಕೊಂಡು ಕಾಡಾನೆಯು ಪಕ್ಕದ ತೋಟಕ್ಕೆ ಹೋಗುವವರೆಗೂ ಕಾದು ನಂತರ ಭಯದಿಂದಲೇ ಮನೆ ಸೇರಿದ ಘಟನೆಯು ಬೇಲೂರು ತಾಲೂಕಿನ ಅರೇಹಳ್ಳಿಯಲ್ಲಿ ಬುಧವಾರ ತಡರಾತ್ರಿ ನಡೆದಿದೆ. ಅರೇಹಳ್ಳಿಯ ಮೇಲನಹಳ್ಳಿ ಬೀದಿಯ ಯುವಕರಾದ ಯಾಸೀನ್ ಹಾಗೂ ಅಬ್ರಾರ್ ಕೆಲಸ ಮುಗಿಸಿಕೊಂಡು ಸಕಲೇಶಪುರದಿಂದ ಅರೇಹಳ್ಳಿಗೆ ವಾಪಾಸ್ಸಾಗುತ್ತಿದ್ದ ವೇಳೆ ದೈತ್ಯ ಆನೆ ಎದುರಾಗಿದ್ದು, ಅದೃಷ್ಟವಶಾತ್ ಯಾವುದೇ ದುರ್ಘಟನೆ ಸಂಭವಿಸಿಲ್ಲ.
ದತ್ತಪೀಠ ಶೋಭಾಯಾತ್ರೆಗೆ ಬೇಲೂರಿನಿಂದ ಕಾರ್ಯಕರ್ತರ ದಂಡು
ಹಿಂದೂ ಸನಾತನ ಧರ್ಮ ಬೆಳೆಯಲು ನಾವೆಲ್ಲರೂ ಕೈಜೋಡಿಸಬೇಕು ಎಂದು ಬಿಜೆಪಿ ಮುಖಂಡ ಡಿಶಾಂತ್ ಹೇಳಿದರು. ಚಿಕ್ಕಮಗಳೂರಿನಲ್ಲಿ ಪ್ರತಿವರ್ಷದಂತೆ ನಡೆಯುವ ಪವಿತ್ರ ದತ್ತಪೀಠ ಶೋಭಾಯಾತ್ರೆಗೆ ಶ್ರೀ ಚೆನ್ನಕೇಶವ ದೇವಸ್ಥಾನದ ಮುಂದೆ ಬೈಕ್ ಹಾಗೂ ಆಟೋದಲ್ಲಿ ಹೊರಟಿರುವ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು, ಹಿಂದೂ ಧರ್ಮ ಅನಾದಿಕಾಲದ ಒಂದು ಶ್ರೇಷ್ಠ ಧರ್ಮ, ಅದು ಬೆಳೆಯಬೇಕೆಂದು ಈ ದೇಶದ ಪ್ರಜೆಗಳ ಆಸೆ, ಯುವಕರು ಹೆಚ್ಚು ಶೋಭಾಯಾತ್ರೆಯಲ್ಲಿ ಪಾಲ್ಗೊಂಡು ಹಿಂದೂ ಧರ್ಮದ ಬಗ್ಗೆ ಗೌರವ ಬರುವಂತೆ ಹಾಗೂ ಜನತೆಗೆ ಅದರ ಬಗ್ಗೆ ಜಾಗೃತಿ ಬರುವಂತೆ ಮಾಡುವುದು ಅವರ ಕರ್ತವ್ಯ ಎಂದರು.
ಮುಂದುವರಿದ ಜಯಕರ್ನಾಟಕ ಪ್ರತಿಭಟನೆ
ವಿವಿಧ ತಾಲೂಕುಗಳಲ್ಲಿನ ಕಾಡಾನೆಗಳ ಹಾವಳಿ ತಪ್ಪಿಸಲು ಶಾಶ್ವತ ಪರಿಹಾರಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನಮ್ಮ ಆಗ್ರಹವಾಗಿದೆ. ಬೇಲೂರು ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕಾಡಾನೆಗಳ ಹಾವಳಿಯಿಂದ ರೈತರು ಬೆಳೆದ ಬೆಳೆ ದಿನದಿಂದ ದಿನಕ್ಕೆ ಹೆಚ್ಚು ನಾಶವಾಗುತ್ತಲೇ ಇದೆ. ಬೇಲೂರು ತಾಲೂಕಿನಲ್ಲಿ ಈಗಾಗಲೇ ೬೦ಕ್ಕೂ ಹೆಚ್ಚು ಕಾಡಾನೆಗಳು ಬೀಡು ಬಿಟ್ಟಿವೆ. ಕಾಡಾನೆ ಹಾವಳಿಯಿಂದ ಶಾಶ್ವತ ಪರಿಹಾರಕ್ಕೆ ಆಗ್ರಹಿಸಿ ನಗರದ ಹೇಮಾವತಿ ಪ್ರತಿಮೆ ಬಳಿ ಜಯಕರ್ನಾಟಕ ಸಂಘಟನೆಯು ನಡೆಸುತ್ತಿರುವ ಪ್ರತಿಭಟನೆ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಮಾಜಿ ಸಿಎಂ ಎಸ್.ಎಂ. ಕೃಷ್ಣ ನಿಧನದ ಹಿನ್ನೆಲೆಯಲ್ಲಿ ಗುರುವಾರ ಮೌನ ಪ್ರತಿಭಟನೆ ನಡೆಸಲಾಯಿತು.
ಟೈಮ್ಸ್ ಗ್ರೂಪ್‌ನಿಂದ ಕ್ರೀಡಾ ಅಕಾಡೆಮಿ ಉದ್ಘಾಟನೆ
ವಿಜಯನಗರದಲ್ಲಿ ಟೈಮ್ಸ್ ಗ್ರೂಪ್ ಆಫ್ ಇನ್ಸಿಟ್ಯೂಷನ್ಸ್ ವತಿಯಿಂದ ಹಾಸನದಲ್ಲಿ ಪ್ರಥಮ ಬಾರಿಗೆ ಕ್ರಿಕೆಟ್, ಬ್ಯಾಸ್ಕೆಟ್ ಬಾಲ್, ಪುಟ್ಬಾಲ್, ಖೋಖೋ, ವಾಲಿಬಾಲ್ ಹಾಗೂ ಕಬ್ಬಡಿ ತರಬೇತಿ ಕೊಡಲಾಗುತ್ತಿದ್ದು, ಡಿಸೆಂಬರ್ ೧೪ರಂದು ಶನಿವಾರ ಬೆಳಿಗ್ಗೆ ೮ ಗಂಟೆಗೆ ಟೈಮ್ಸ್ ಸ್ಪೋರ್ಟ್ಸ್ ಅಕಾಡೆಮಿ ಉದ್ಘಾಟನೆ ಆಗಲಿದೆ ಎಂದು ಟೈಮ್ಸ್ ವಿದ್ಯಾ ಸಂಸ್ಥೆ ಕಾರ್ಯದರ್ಶಿ ಬಿ.ಕೆ. ಗಂಗಾಧರ್ ತಿಳಿಸಿದರು.
ನಾಳೆ ದೌರ್ಜನ್ಯ ತಡೆ ಕಾಯ್ದೆ ಕುರಿತು ಕಾನೂನು ಅರಿವು
ದಲಿತರ ಮೇಲಿನ ದೌರ್ಜನ್ಯ ನಿಯಂತ್ರಣಕ್ಕೆ ಪ್ರತ್ಯೇಕವಾದ ಕಾನೂನಿದೆ. ಹಾಗೆ ಪ್ರತ್ಯೇಕವಾದ ನ್ಯಾಯಾಲಯವಿದೆ ಎಂದು ಸಮುದಾಯದ ದಲಿತ ಜನರಿಗೆ ತಿಳಿದಿಲ್ಲ. ಇದಕ್ಕೆ ಕಾರಣ ದಲಿತ ಸಮುದಾಯದ ಜನರಿಗೆ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ (ದೌರ್ಜನ್ಯಗಳ ತಡೆ) ಕಾಯಿದೆಯ ಬಗ್ಗೆ ಕಾನೂನು ಅರಿವು ಇಲ್ಲದಿರುವುದು. ಹಾಗಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಡಿಸೆಂಬರ್ ೧೪ರ ಶನಿವಾರ ಬೆಳಿಗ್ಗೆ ಹತ್ತು ಗಂಟೆಗೆ ದಲಿತರ ಮೇಲಿನ ದೌರ್ಜನ್ಯ ತಡೆಗಟ್ಟಲು ಕಾನೂನು ಅರಿವು ಹಮ್ಮಿಕೊಳ್ಳಲಾಗಿದೆ ಎಂದು ಭೀಮ್ ಆರ್ಮಿ ಜಿಲ್ಲಾಧ್ಯಕ್ಷ ಎಚ್.ಎಸ್. ಪ್ರದೀಪ್ ತಿಳಿಸಿದರು.
  • < previous
  • 1
  • ...
  • 219
  • 220
  • 221
  • 222
  • 223
  • 224
  • 225
  • 226
  • 227
  • ...
  • 510
  • next >
Top Stories
ದೇಶದ ಭದ್ರತೆಗೆ ಬಲ ನೀಡುವ ಬೈರಾಬಿ-ಸೈರಾಂಗ್ ರೈಲು ಮಾರ್ಗ
ಮಿಜೋರಾಂಗೆ ಸಂಪರ್ಕ ಕಲ್ಪಿಸುವ ಬೈರಾಬಿ-ಸೈರಾಂಗ್ ರೈಲು ಮಾರ್ಗ ಉದ್ಘಾಟನೆ
ಬಿಪಿಎಲ್‌ ಕಾರ್ಡ್‌ಗೆ 1.20 ಲಕ್ಷ ಆದಾಯ ಮಿತಿ ಕೇಂದ್ರದ್ದು: ಸಿಎಂ
ಜಾತಿ ಸಮೀಕ್ಷೆಗೆ ಆನ್‌ಲೈನ್‌ನಲ್ಲೂ ಭಾಗಿ ಅವಕಾಶ
ರಾಜ್ಯದ ಉತ್ತರ ಒಳನಾಡಲ್ಲಿ ಮೂರು ದಿನ ಮಳೆ ಸಾಧ್ಯತೆ : ವಾಯುಭಾರ ಕುಸಿತ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved