ಮನುಷ್ಯ ದುರಾಸೆ ಹಿಂದೆ ಬಿದ್ದು ದುಃಖಿಸುತ್ತಿದ್ದಾನೆ-ಗವಿಶ್ರೀಮನುಷ್ಯನ ಬದುಕು ಎರಡು ಆದ್ಯಂತಗಳ ನಡುವೆ ನಡಿತದ, ಒಂದು ಹುಟ್ಟು ಇನ್ನೊಂದು ಸಾವು, ಹುಟ್ಟು ಆದಿಯಾದರೆ ಸಾವು ಅಂತ್ಯ ಆಗೆತಿ, ಇದರ ನಡುವಿನ ಬದುಕಿನಲ್ಲಿ ಮನುಷ್ಯ ಜೀವನದ ಬಹುಮುಖ್ಯ ಉದ್ದೇಶ ಸಂತೋಷವೇ ಆಗಿದೆ. ಆದರೆ ನಶ್ವರ ಜೀವನದಲ್ಲಿ ದುರಾಸೆ ಹಿಂದೆ ಬಿದ್ದು ಮನುಷ್ಯ ಸದಾ ದುಃಖವನ್ನೇ ಪಡೆಯುತ್ತಿದ್ದಾನೆ. ಇದು ವಾಸ್ತವ ಎಂದು ಕೊಪ್ಪಳ ಗವಿಸಿದ್ದೇಶ್ವರ ಶ್ರೀಗಳು ಹೇಳಿದರು.