ಮನುಷ್ಯನನ್ನು ಮನುಷ್ಯನಂತೆ ನೋಡುವ ಒಂದೇ ಧರ್ಮ ಸಾಕು-ಗವಿಶ್ರೀಗಾಳಿ, ನೀರು, ಬೆಳಕು, ಪರಿಸರ, ಸೂರ್ಯ, ಚಂದ್ರ ಎಲ್ಲವನ್ನೂ ನಾವೆಲ್ಲರೂ ಒಂದೇ ರೀತಿ ನೋಡುತ್ತೇವೆ. ಆದರೆ ಧರ್ಮದ ವಿಷಯ ಬಂದಾಗ ಧರ್ಮಗಳು ಎಂಬ ಬಹುವಚನವೇಕೆ ಬೇಕು? ಎಲ್ಲವೂ ದೇವರ ಕೃಪೆಯಿಂದ ಒದಗಿ ಬಂದಿರುವಾಗ "ನನ್ನದು " ಎನ್ನುವ ಮನೋಭಾವನೆ ನಮಗೇಕೆ ಬೇಕು, ಮನುಷ್ಯನನ್ನು ಮನುಷ್ಯನಂತೆ ನೋಡುವಂತಹ ಒಂದೇ ಧರ್ಮವನ್ನು ನಾವೆಲ್ಲರೂ ಪಾಲನೆ ಮಾಡಬೇಕಾಗಿದೆ ಎಂದು ಕೊಪ್ಪಳ ಗವಿಸಿದ್ದೇಶ್ವರ ಶ್ರೀಗಳು ಹೇಳಿದರು.