ಮಾಜಿ ಸಚಿವ, ಮಾಜಿ ಉಪಸಭಾಧ್ಯಕ್ಷ ಮನೋಹರ ತಹಸೀಲ್ದಾರ್ ಇನ್ನಿಲ್ಲಮಾಜಿ ಸಚಿವ, ವಿಧಾನಸಭೆಯ ಮಾಜಿ ಉಪ ಸಭಾಧ್ಯಕ್ಷ, ನಾಲ್ಕುಬಾರಿ ಹಾನಗಲ್ ಕ್ಷೇತ್ರದಿಂದ ಜಯ ಸಾಧಿಸಿದ್ದ ಸಜ್ಜನ ರಾಜಕಾರಣಿ ಅಕ್ಕಿವಳ್ಳಿಯ ಮನೋಹರ ತಹಶೀಲ್ದಾರ (78) ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಗುರುವಾರ ಬೆಳಗಿನಜಾವ ಕೊನೆ ಉಸಿರೆಳೆದರು.