ಅಸುಂಡಿ ಕೆರೆ ಭರ್ತಿ: ರೈತರ ಹೊಲಗಳಿಗೆ ನುಗ್ಗಿದ ನೀರುಕಳೆದ ೪ ದಿನಗಳಿಂದ ಸುರಿಯುತ್ತಿರುವ ಮಳೆಯ ರಭಸಕ್ಕೆ ಜಿಲ್ಲೆಯ ಐತಿಹಾಸಿಕ, ಅಂದಾಜು ೪೯೦ ಎಕರೆ ವಿಸ್ತೀರ್ಣವನ್ನು ಹೊಂದಿರುವ ತಾಲೂಕಿನ ಅಸುಂಡಿ ದೊಡ್ಡ ಕೆರೆಯು ಕೋಡಿ ಬಿದ್ದಿದೆ. ಕೆರೆ ಕೆಳಭಾಗದ ನೂರಾರು ಎಕರೆ ಜಮೀನು ಜಲಾವೃತವಾಗಿದ್ದು, ಬೆಳೆ ಹಾನಿಯಾಗಿದೆ.