ಶಿಕ್ಷಣ, ದಾಸೋಹಕ್ಕೆ ನಾಡಿನಲ್ಲಿ ಹೆಸರಾಗಿರುವ ಹುಕ್ಕೇರಿಮಠಶಿಕ್ಷಣ, ದಾಸೋಹಕ್ಕೆ ಹುಕ್ಕೇರಿಮಠ ನಾಡಿನಲ್ಲಿ ಹೆಸರಾಗಿದ್ದು, ಜ್ಞಾನದ ಜೊತೆಗೆ ಬದುಕನ್ನು ಕಟ್ಟಿಕೊಳ್ಳಲು ಸಹಾಯ ಮಾಡಿದ ಹುಕ್ಕೇರಿಮಠ ಶಿಕ್ಷಣ ಸಂಸ್ಥೆಯ ಕಾರ್ಯ ಸ್ಮರಣೀಯವಾಗಿದೆ. ಇಂತಹ ಸಂಸ್ಥೆಯಲ್ಲಿ ಕಲಿತು ಉನ್ನತ ಹಂತಕ್ಕೆ ಬೆಳೆದಿರುವ ಹಳೆಯ ವಿದ್ಯಾರ್ಥಿಗಳೇ ಈ ಸಂಸ್ಥೆಗೆ ಶಕ್ತಿಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಹೇಳಿದರು.