ಕನ್ನಡ ಜ್ಯೋತಿ ರಥಯಾತ್ರೆ ಅಭೂತಪೂರ್ವ ಸ್ವಾಗತಕ್ಕೆ ಸಿದ್ಧತೆ ಆಗಲಿಮಂಡ್ಯ ಜಿಲ್ಲೆಯಲ್ಲಿ ಡಿ.೨೦, ೨೧, ಹಾಗೂ ೨೨ರಂದು ನಡೆಯುವ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕನ್ನಡ ಜ್ಯೋತಿ ರಥಯಾತ್ರೆ ಜಿಲ್ಲೆಯಲ್ಲಿ ಸೆ.೨೬ ಹಾಗೂ ೨೭ರಂದು ಸಂಚರಿಸಲಿದೆ. ಈ ರಥ ಯಾತ್ರೆ ಅಭೂತಪೂರ್ವ ಸ್ವಾಗತಕ್ಕೆ ಜಿಲ್ಲೆಯಲ್ಲಿ ಅಚ್ಚುಕಟ್ಟಾಗಿ ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ ಸೂಚನೆ ನೀಡಿದರು.