ರಾಜ್ಯದ ಮೂಲೆ ಮೂಲೆಗೂ ರಸ್ತೆ ಸಂಪರ್ಕ ಕಲ್ಪಿಸಲು ವಿಶೇಷ ಅನುದಾನ-ಸಚಿವ ಜಾರಕಿಹೊಳಿರಸ್ತೆಗಳ ಅಭಿವೃದ್ಧಿ ರಾಜ್ಯದ ಪ್ರಗತಿಗೆ ಮಾನದಂಡವಾಗಿದೆ. ಸಮರ್ಪಕ ರಸ್ತೆಗಳು ಕೃಷಿ, ಕೈಗಾರಿಕೆ, ವಾಣಿಜ್ಯ ಹಾಗೂ ಆರ್ಥಿಕ ಅಭಿವೃದ್ಧಿ ಬೆಳವಣಿಗೆಯನ್ನು ನಿರ್ಧರಿಸಲಿದ್ದು, ರಾಜ್ಯದ ಮೂಲೆ ಮೂಲೆಗಳಿಗೂ ರಸ್ತೆಗಳನ್ನು ಸಂಪರ್ಕಿಸುವಲ್ಲಿ ಆದ್ಯತೆಗೆ ಅನುಗುಣವಾಗಿ ವಿಶೇಷ ಅನುದಾನ ನೀಡುವುದಾಗಿ ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಭರವಸೆ ನೀಡಿದರು.