ಇಮೇಜ್ ಉಳಿಸಿಕೊಳ್ಳಲು ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು-ಬೊಮ್ಮಾಯಿಇನ್ನೊಬ್ಬರು ತಪ್ಪು ಮಾಡುತ್ತಾರೆ ಅಂದರೆ ನೀವೂ ತಪ್ಪು ಮಾಡಲಿಕ್ಕೆ ಲೈಸೆನ್ಸ್ ಸಿಕ್ಕ ಹಾಗಾ? ಮುಡಾ ಪ್ರಕರಣದಲ್ಲಿ ಹೈ ಕೋರ್ಟ್ ಹೊಸ ಅಂಶಗಳ ಬಗ್ಗೆ ಬೆಳಕು ಚೆಲ್ಲಿದೆ. ಸಿದ್ದರಾಮಯ್ಯ ಅವರ ಇಮೇಜ್ ಉಳಿಸಿಕೊಳ್ಳಲು, ನೈತಿಕತೆ ಮೆರೆಯಲು, ತಮಗಿರುವ ಗೌರವ ಉಳಿಸಿಕೊಳ್ಳಲು ರಾಜೀನಾಮೆ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.