ಬೆಂಗಳೂರಿನಲ್ಲಿ ನಿರ್ಗತಿಕರಿಗೆ 167 ಮನೆ ನಿರ್ಮಾಣನಮ್ಮ ಸಂಘಟನೆ ರಾಜ್ಯದ ಇತರೆ ಕನ್ನಡ ಪರ ಸಂಘಟನೆಗಳಿಗಿಂತ ವಿಭಿನ್ನವಾಗಿದ್ದು, ಕೇವಲ ನೆಲ, ಜಲ, ಗಡಿ ವಿಚಾರವಾಗಿ ಹೋರಾಟ ಮಾಡದೇ ಅನಾಥ, ನಿರ್ಗತಿಕರ ಕಣ್ಣೀರೊರೆಸುವ ಕೆಲಸ ಮಾಡುತ್ತಿದೆ. ಈ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಸುಮಾರು 167 ಮನೆಗಳನ್ನು ಕಟ್ಟಿಸಿಕೊಟ್ಟು ಅವರಿಗೆ ಶಾಶ್ವತ ನೆರಳು ಕಲ್ಪಿಸಿದ್ದೇವೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ರಾಜ್ಯಾಧ್ಯಕ್ಷ ಪಿ. ಕೃಷ್ಣೇಗೌಡ ಹೇಳಿದರು.