ಬ್ಯಾಡಗಿಯಲ್ಲಿ ವಿಧಾನಸೌಧ ಮಾದರಿಯಲ್ಲಿ ಸಭಾಭವನ ನಿರ್ಮಾಣ: ಶಾಸಕ ಬಸವರಾಜ ಶಿವಣ್ಣನವರವಿಧಾನಸೌಧದ ಮಾದರಿಯಲ್ಲಿ ಸಭಾಭವನ ನಿರ್ಮಾಣಕ್ಕೆ ಚಾಲನೆ ನೀಡಲಾಗುತ್ತಿದೆ. ಇದರಲ್ಲಿ 100ಕ್ಕೂ ಹೆಚ್ಚು ಅಧಿಕಾರಿಗಳಿಗೆ ಪ್ರತ್ಯೇಕ ಆಸನದ ವ್ಯವಸ್ಥೆ ಕಲ್ಪಿಸಲಾಗುತ್ತಿದ್ದು, ಇದರಿಂದ ತ್ರೈಮಾಸಿಕ ಕೆಡಿಪಿ ಸೇರಿದಂತೆ ಶಾಸಕರ ಬಹುತೇಕ ಕಾರ್ಯಕ್ರಮಗಳಿಗೆ ಸಭೆ, ಸಮಾರಂಭಗಳಿಗೆ ಸೂಕ್ತವಾದ ಅನುಕೂಲತೆ ಕಲ್ಪಿಸಲಾಗುವುದು.