ಸಂಚಾರಿ ಪೊಲೀಸ್ ಮೇಲೆ ಕಾರು ಹತ್ತಿಸಿ ದುರಹಂಕಾರ: ಪರಾರಿಯಾದ ಆರೋಪಿ ಸೆರೆನಗರದ ಟೋಲ್ ಗೇಟ್ ಸಮೀಪದಲ್ಲಿ ಗುರುವಾರ ಎರಡು ಕಾರುಗಳ ನಡುವೆ ಅಪಘಾತ ಸಂಭವಿಸಿತ್ತು. ಈ ವೇಳೆ ಜಿ.ಟಿ. ಸರ್ಕಲ್‌ನಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿ ಸಂಜು ಸ್ಥಳಕಾಗಮಿಸಿ ಪರಿಶೀಲನೆ ನಡೆಸಲು ಮುಂದಾಗಿದ್ದರು. ಈ ವೇಳೆ ಮತ್ತೊಂದು ಕಾರನ್ನು ಬದಿಗೆ ಸರಿಸುವಂತೆ ಸೂಚಿಸಿದರು. ಆಗ ಕಾರು ಚಾಲಕ ವಾಹನವನ್ನು ನಿಲ್ಲಿಸದೆ ಕರ್ತವ್ಯದಲ್ಲಿದ್ದ ಪೊಲೀಸ್ ಕಾನ್‌ಸ್ಟೇಬಲ್ ಮೇಲೆಯೇ ಕಾರು ಹಾಯಿಸಲು ಯತ್ನಿಸಿ ತಪ್ಪಿಸಿದ್ದ.