ಧರಣಿ ಯಶಸ್ವಿ: ಹಿಂದೆ ಸಂಚರಿಸಿದ ಬಸ್ಸಲ್ಲೇ ಊರಿಗೆ ಮರಳಿದ ಗ್ರಾಮಸ್ಥರು!ಹಲವು ವರ್ಷಗಳಿಂದ ನಿಂತು ಹೋಗಿದ್ದ ಕೆಎಸ್‌ಆರ್‌ಟಿಸಿ ಸಂಚಾರ ಮರು ಆರಂಭಿಸುವಂತೆ ಪ್ರತಿಭಟನೆ ನಡೆಸಿದ ಗ್ರಾಮಸ್ಥರು, ಕೊನೆಗೂ ತಮ್ಮೂರಿಗೆ ಬಸ್‌ನೊಂದಿಗೆ ಮರಳಿದ ಅಪರೂಪದ ಘಟನೆ ಮಡಿಕೇರಿ ನಗರದಲ್ಲಿ ನಡೆದಿದೆ. ಪ್ರತಿಭಟನಾಕಾರರ ಆಗ್ರಹಕ್ಕೆ ಮಣಿದ ಸಹಾಯಕ ಸಂಚಾರಿ ಮೇಲ್ವಿಚಾರಕರು ತಕ್ಷಣವೇ ಜಾರಿಗೆ ಬರುವಂತೆ ಬಸ್ ಸಂಚಾರ ಪುನರಾರಾಂಭಿಸಿದರಲ್ಲದೆ, ಅದೇ ಬಸ್‌ನಲ್ಲಿ ಪ್ರತಿಭಟನಾಕಾರರನ್ನು ಅವರ ಊರಿಗೆ ಕಳುಹಿಸಿದರು.