ದ್ವಿಚಕ್ರ ವಾಹನದಲ್ಲಿ ದಾಖಲೆ ರಹಿತ 4 ಲಕ್ಷ ರು. ಸಾಗಾಟ ಪತ್ತೆಟಿಬೇಟಿಯನ್ ನಿರಾಶ್ರಿತ ವ್ಯಕ್ತಿ ತನ್ನ ದ್ವಿಚಕ್ರ ವಾಹನದಲ್ಲಿ ಬೈಲುಕುಪ್ಪೆ ಕಡೆಯಿಂದ ಕುಶಾಲನಗರ ಪಟ್ಟಣ ಕಡೆಗೆ ಹಣ ಸಾಗಿಸುತ್ತಿದ್ದ ಸಂದರ್ಭ ಅಧಿಕಾರಿಗಳು ನಗದು ವಶಪಡಿಸಿಕೊಂಡಿದ್ದಾರೆ. ನಾಲ್ಕು ಲಕ್ಷ ರು. ನಗದು ಹಣವನ್ನು ಕುಶಾಲನಗರ ವಾಹನ ತಪಾಸಣಾ ಕೇಂದ್ರದಲ್ಲಿ ಚುನಾವಣಾ ಅಧಿಕಾರಿಗಳು ಪತ್ತೆ ಹಚ್ಚಿದರು.