ಮುದ್ದಂಡ ಕಪ್ ಹಾಕಿ ನಮ್ಮೆಗೆ ದಿನಗಣನೆಬೆಳ್ಳಿಹಬ್ಬ ಸಂಭ್ರಮದ ಈ ಬಾರಿಯ ಹಾಕಿ ನಮ್ಮೆ, ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ನಡೆಯಲಿದ್ದು, ಆಯೋಜಕರು ಬಿರುಸಿನ ಸಿದ್ಧತೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಮಾರ್ಚ್ ೫ರಂದು ಭೂಮಿಪೂಜೆಯೊಂದಿಗೆ ಮೈದಾನ ಕೆಲಸ ಹಾಗೂ ಗ್ಯಾಲರಿ ನಿರ್ಮಾಣ ಕಾಮಗಾರಿಗೆ ಚಾಲನೆ ದೊರೆತ್ತಿದ್ದು, ನಗರದ ಫೀಲ್ಡ್ ಮಾರ್ಷಲ್ ಕಾಲೇಜಿನ ಎರಡು ಮೈದಾನ ಹಾಗೂ ಜಿಲ್ಲಾ ಪೊಲೀಸ್ ಮೈದಾನ ಸೇರಿದಂತೆ ಒಟ್ಟು ಮೂರು ಮೈದಾನಗಳಲ್ಲಿ ಹಾಕಿ ಪಂದ್ಯಾವಳಿ ನಡೆಯಲಿದೆ.