ಅನುದಾನಿತ ಶಾಲೆಗಳ ಮಕ್ಕಳ ಅನುಪಾತ ಮಿತಿ ಸಡಿಲಗೊಳಿಸಿ: ಭೋಜೇಗೌಡ ಆಗ್ರಹಅನುದಾನಿತ ಶಿಕ್ಷಣ ಸಂಸ್ಥೆಗಳು ಹಾಗೂ ಶಿಕ್ಷಕರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದರಲ್ಲಿ ಪ್ರಮುಖವಾಗಿ ಮಕ್ಕಳ ಸಂಖ್ಯೆ ಕಡಿಮೆ ಆಗುತ್ತಿರುವುದು. ಆದ್ದರಿಂದ ಸರ್ಕಾರ ಇಪ್ಪತ್ತೈದು ಮಕ್ಕಳ ಅನುಪಾತದ ಸಂಖ್ಯೆಯ ಮಿತಿ ಸಡಿಲಗೊಳಿಸುವ ಮೂಲಕ ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳನ್ನು ಉಳಿಸಿ ಮಕ್ಕಳ ಕಲಿಕೆಗೆ ಹಾಗೂ ಶಿಕ್ಷಕರ ಸೇವಾ ಭದ್ರತೆಗೆ ಸರ್ಕಾರ ಗಮನಹರಿಸಬೇಕು ಎಂದು ಭೋಜೇಗೌಡ ಒತ್ತಾಯಿಸಿದರು.