ನೆಲಜಿ ಇಗ್ಗುತ್ತಪ್ಪ ದೇವಸ್ಥಾನದ ವಾರ್ಷಿಕ ಭಕ್ತ ಸಮಾರಾಧನೆ ಉತ್ಸವದೇವಸ್ಥಾನದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಪೌಳಿಯ ಉದ್ಘಾಟನಾ ಕಾರ್ಯಕ್ರಮದ ನಿಮಿತ್ತ ದೇವಾಲಯದಲ್ಲಿ ಅಭಿಷೇಕ, ಗಣಪತಿ ಹೋಮ, ರುದ್ರ ಮಹಾಯಾಗ ಹಲವು ಪೂಜಾ ಕೈಂಕರ್ಯಗಳು ನೆರವೇರಿದವು. ತುಲಾಭಾರ ಸೇವೆ, ವಾರ್ಷಿಕ ಭಕ್ತ ಸಮಾರಾಧನೆ, ಮಹಾಪೂಜೆ, ತೀರ್ಥ ಪ್ರಸಾದ ವಿತರಣೆ ಅನ್ನ ಸಂತರ್ಪಣೆ ನಡೆದ ಬಳಿಕ ಜರುಗಿದ ದೇವರ ನೃತ್ಯ ಬಲಿಯನ್ನು ಭಕ್ತರು ಭಯಭಕ್ತಿಯಿಂದ ವೀಕ್ಷಿಸಿ, ಹರಕೆ ಕಾಣಿಕೆಯನ್ನು ಒಪ್ಪಿಸಿದರು.