ಕೋಚಿಮುಲ್ನಿಂದ ದಿನಕ್ಕೆ ೧೦ ಲಕ್ಷ ಲೀ. ಹಾಲು ಸಂಗ್ರಹಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ಪ್ರಸ್ತುತ ಭೀಕರ ಬರದ ನಡುವೆಯೂ ಅವಿಭಜಿತ ಜಿಲ್ಲೆಯ ೧೯೨೮ ಹಾಲು ಉತ್ಪಾದಕರ ಸಹಕಾರ ಸಂಘಗಳ ಮೂಲಕ ದಿನಕ್ಕೆ ಸರಾಸರಿ ೧೦ ಲಕ್ಷ ಲೀಟರ್ ಹಾಲು ಸಂಗ್ರಹಿಸುತ್ತಿದ್ದು, ಕಳೆದ ಸಾಲಿಗಿಂತ ಶೇ.೮.೫ ರಷ್ಟು ಸಂಗ್ರಹಣೆ ಹೆಚ್ಚಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ಕೆ.ವೈ.ನಂಜೇಗೌಡ ತಿಳಿಸಿದ್ದಾರೆ.