ನಿಸರ್ಗ ಪೂಜಿಸುವ ಮೂಲಕ ಸಂಕ್ರಾಂತಿ ಸಂಭ್ರಮಿಸಿ ರೈತನ ಒಡನಾಡಿಗಳಾದ ಹಸು, ಕರು, ಎತ್ತುಗಳನ್ನು ತೊಳೆದು ಸಿಂಗರಿಸಿ, ದೇವರಂತೆ ಪೂಜಿಸುವ ಹಬ್ಬವೇ ಸಂಕ್ರಾಂತಿಯಾಗಿದೆ. ಎಳ್ಳುಬೆಲ್ಲ ಕೊಟ್ಟು ಒಳ್ಳೆಯ ಮಾತನಾಡು ಎಂಬ ನಮ್ಮ ಹಿರಿಯರು ಹಾಕಿಕೊಟ್ಟ ಪದ್ದತಿ ಸಮಾಜದಲ್ಲಿ ಶಾಂತಿ, ಪ್ರೀತಿ ನೆಲಸಲು ಸಹಾಯ ಮಾಡಿದೆ, ಈ ಹಬ್ಬದ ವಿಶೇಷವೇ ಪ್ರಕೃತಿಯನ್ನು ಪೂಜಿಸುವುದಾಗಿದೆ.