ಕಠಿಣ ಪರಿಶ್ರಮ,ಛಲದಿಂದ ಸಾಧನೆ ಸುಲಭ: ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಒಬ್ಬ ಸಾಮಾನ್ಯ ರೈತನ ಮಗನಾಗಿದ್ದ ನಾನು ಇದೇ ಶಾಲೆಯಲ್ಲಿ ಶಿಕ್ಷಣ ಪಡೆದಿದ್ದೇನೆ. ನಾನೇನು ಮೇಧಾವಿ ವಿದ್ಯಾರ್ಥಿಯಾಗಿರಲಿಲ್ಲ, ಸಾಮಾನ್ಯ ವಿದ್ಯಾರ್ಥಿಯಾಗಿದ್ದೆ. ಬಾಲ್ಯದಿಂದಲೇ ಶಿಸ್ತು, ಪರಿಶ್ರಮ, ಸಾಧನೆ ಮಾಡಬೇಕೆಂಬ ಛಲ, ಗುರು ಹಿರಿಯರನ್ನು ಗೌರವಿಸುವ ಮನಸ್ಥಿತಿ ನನ್ನದಾಗಿತ್ತು. ಇದೇ ಸರ್ಕಾರಿ ಶಾಲೆಯಲ್ಲಿ ಓದಿದ ನಾನು ಇಂದು ಸತತ 3 ಸಲ ಎಂ.ಎಲ್.ಎ ಆಗಿದ್ದೇನೆ, ಉದ್ಯಮಿಯಾಗಿದ್ದೇನೆ.