ಗಗನಕ್ಕೇರಿದ ಲಿಂಬೆಹಣ್ಣಿನ ದರ, ಬೆಳೆಗಾರರು ಖುಷ್ಕಳೆದ ಒಂದು ವಾರದ ಹಿಂದಷ್ಟೆ ಒಂದು ಲಿಂಬೆಹಣ್ಣಿಗೆ ₹ 5ರಿಂದ ₹ 6 ಇತ್ತು. ಈ ವಾರ ದಿಢೀರ್‌ನೆ ಬೆಲೆ ಏರಿಕೆ ಕಂಡಿದ್ದು ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿದೆ. ಸದ್ಯ ಮಾರುಕಟ್ಟೆಯಲ್ಲಿ ಒಂದು ಸಣ್ಣ ಲಿಂಬೆಹಣ್ಣಿನ ದರವು ₹ 7ರಿಂದ ₹ 8 ಇದೆ. ದೊಡ್ಡ ಗಾತ್ರದ ಲಿಂಬೆಹಣ್ಣು ₹ 10 ತಲುಪಿದೆ. ಜತೆಗೆ ಬೇಸಿಗೆ ಇರುವುದರಿಂದ ಬೇಡಿಕೆಯೂ ಬಂದಿದೆ.