ಕುಷ್ಟಗಿಯಲ್ಲಿ ಮೆಕ್ಕೆಜೋಳಕ್ಕೆ ಸೈನಿಕ ಹುಳುವಿನ ಕಾಟಕುಷ್ಟಗಿ ತಾಲೂಕಿನ ಹಲವೆಡೆ ಸಮೃದ್ಧವಾಗಿ ಬೆಳೆದ ಗೋವಿನಜೋಳ (ಮೆಕ್ಕೆಜೋಳ) ಬೆಳೆಗೆ ಸೈನಿಕ ಹುಳು ಕಾಟ ಹೆಚ್ಚಾಗುತ್ತಿದ್ದು, ರೈತ ಸಮುದಾಯ ಆತಂಕ ಹೆಚ್ಚುತ್ತಿದೆ. ಸೈನಿಕ ಹುಳುವಿನ ಕಾಟದಿಂದ ರೋಗಬಾಧೆ ಹೆಚ್ಚಾಗುತ್ತಿದ್ದು, ಇಳುವರಿಯು ಕುಸಿತದ ಭೀತಿ ಎದುರಾಗಿದೆ.