ಕೊಪ್ಪಳ ವಿವಿ ಉಳಿಸಿಕೊಳ್ಳುವೆ: ಬಸವರಾಜ ರಾಯರಡ್ಡಿಬಿಜೆಪಿ ಸರ್ಕಾರ 10 ವಿಶ್ವವಿದ್ಯಾಲಯಗಳನ್ನು ಅವೈಜ್ಞಾನಿಕವಾಗಿ ಘೋಷಿಸಿತು. ಹೀಗಾಗಿಯೇ ಈಗ ಸಮಸ್ಯೆಯಾಗಿದೆ. ಆ ಆದೇಶದಲ್ಲಿ ಜಮೀನು ಖರೀದಿಸಬಾರದು, ಕಟ್ಟಡ ಕಟ್ಟಬಾರದು ಮತ್ತು ಯಾವುದೇ ಮೂಲಭೂತ ಸೌಕರ್ಯಗಳನ್ನು ತ್ವರಿತವಾಗಿ ನೀಡಲು ಆಗುವುದಿಲ್ಲ ಎಂದು ಸೂಚಿಸಿ ಕೇವಲ ₹ 2 ಕೋಟಿ ಮಾತ್ರ ನೀಡುತ್ತೇವೆ ಎಂದು ತಿಳಿಸಲಾಗಿದೆ.