ನಾನು ದೇವದಾಸಿಯರ ಆಸ್ತಿ ಕಬಳಿಸಿಲ್ಲ: ಬಸವರಾಜ ದಢೇಸೂಗುರುನಾನು ಆಗ ಶಾಸಕನು ಆಗಿರಿಲ್ಲ. ದಢೇಸುಗೂರು ವ್ಯಾಪ್ತಿಯಲ್ಲಿನ ಭೂಮಿಗೆ ನೀರು ಸಹ ಇರಲಿಲ್ಲ. ಆಗ ನಾನು ತುಂಗಭದ್ರಾ ನದಿಯಿಂದ ಸ್ವಂತ ಹಣದಿಂದ ನೀರಾವರಿ ಮಾಡಿದ್ದೇನೆ. ಆಗ ನೀರು ಕೊಡುವುದಕ್ಕೆ ಪರ್ಯಾಯವಾಗಿ ಭೂಮಿ ನೀಡಿದ್ದಾರೆ. ಇದು ನಾನಷ್ಟೇ ಅಲ್ಲ, ಆ ಭಾಗದಲ್ಲಿ ಅನೇಕರು ಮಾಡಿದ್ದಾರೆ. ಆದರೆ, ಈಗ ಅದನ್ನು ತಪ್ಪಾಗಿ ಅರ್ಥೈಸಿ, ನನ್ನ ವಿರುದ್ಧ ಷಡ್ಯಂತ್ರ ಮಾಡಲಾಗುತ್ತಿದೆ.