ಹತ್ತಿ ಬೀಜೋತ್ಪಾದನಾ ರೈತರಿಗೆ ಅನ್ಯಾಯ, ಪ್ರತಿಭಟನೆಪ್ರತಿ ವರ್ಷವೂ ಪೂರ್ವ ಮುಂಗಾರು ಹಾಗೂ ಮುಂಗಾರು ಹಂಗಾಮಿನಲ್ಲಿ ರೈತರು ಹತ್ತಿ ಬೀಜೋತ್ಪಾದನೆಯಲ್ಲಿ ತೊಡಗಿಕೊಳ್ಳಲು ವಿವಿಧ ಕಂಪನಿಗಳು ಪ್ರೇರೇಪಿಸಿವೆ. ಕಾನೂನಾತ್ಮಕ ಕೃಷಿ ಒಪ್ಪಂದ ಏರ್ಪಡಿಸದೆ, ರೈತರಿಗೆ ಬೀಜೋತ್ಪಾದನಾ ಹತ್ತಿ ಬೀಜ ನೀಡಿ, ಡ್ರಿಪ್ ಸಾಮಾಗ್ರಿ, ಗೊಬ್ಬರ ಮತ್ತು ಕೀಟನಾಶಕ ನೀಡಿ ಬೆಳೆ ಬೆಳೆಯಲು ಹುರಿದುಂಬಿಸಿವೆ.