ಲೇಖಕನಿಗೆ ಮಾತು ಮಾಧ್ಯಮವಿದ್ದಂತೆ: ಪ್ರೊ.ಎಂ.ಕೃಷ್ಣೇಗೌಡಜನಸಾಮಾನ್ಯರ ಬದುಕು, ಅವರು ಎದುರಿಸುತ್ತಿರುವ ಸಂಕಷ್ಟಗಳು, ತಾನಿರುವ ಪ್ರದೇಶ, ಭಾಷೆ, ನಾಡು, ರಾಷ್ಟ್ರವನ್ನು ಕಟ್ಟಿಕೊಡುವುದು ಕವಿಗಳು, ಸಾಹಿತಿಗಳು, ಲೇಖಕರಾದವರ ಕರ್ತವ್ಯ. ಸಾಮಾನ್ಯ ಜನರಿಗೆ ಕೇಳಿಸದ, ಅವರ ಅರಿವಿಗೆ ಬಾರದ ಅನೇಕ ಸಂಗತಿಗಳು ನಿಮಗೆ ಗೊತ್ತಾಗಬೇಕು. ಅದನ್ನು ಸಾಹಿತ್ಯ ರೂಪದಲ್ಲಿ ಹೊರತಂದಾಗ ವಿಶೇಷವಾಗಿ ಓದುಗರನ್ನು ಆಕರ್ಷಿಸಲು ಸಾಧ್ಯ.