ಸಿದ್ದು ಸರ್ಕಾರದ ಒಂದು ವರ್ಷದ ಅಂಕಪಟ್ಟಿ ಬಿಡುಗಡೆಸಿದ್ದರಾಮಯ್ಯ ಸರ್ಕಾರದ ಒಂದು ವರ್ಷದ ಪರೀಕ್ಷೆಯಲ್ಲಿ ಸಂಪೂರ್ಣ ಫೇಲ್ ಆಗಿದೆ. ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡದೆ, ಗ್ಯಾರಂಟಿ ನೆಪದಲ್ಲಿ ಬೊಕ್ಕಸ ಬರಿದು ಮಾಡಿ ನಿಂತ ನೀರಾಗಿರುವ ಕಾಂಗ್ರೆಸ್ ಸರ್ಕಾರ, ನಾಡಿನ ರೈತರು, ಶ್ರಮಿಕರು, ಮಹಿಳೆಯರು, ಯುವಕರು, ಉದ್ಯಮಿಗಳು, ಹಿಂದುಳಿದ ಸಮುದಾಯಗಳು ಸೇರಿದಂತೆ ವಿವಿಧ ವರ್ಗಗಳ ಹಿತಾಸಕ್ತಿಗಳನ್ನು ಕಡೆಗಣಿಸಿ ನಂಬಿ ಮತ ಹಾಕಿದ ಮತದಾರರ ಕಿವಿಗೆ ಹೂವಿಟ್ಟಿದೆ.