ಕೆರೆಯಲ್ಲಿ ಹೂಳು ತೆಗೆಯುಲು ತಡೆ ಖಂಡಿಸಿ ಗ್ರಾಪಂ ಸದಸ್ಯರಿಂದ ಪ್ರತಿಭಟನೆಭುಜುವಳ್ಳಿ, ಕಪರೆ ಕೊಪ್ಪಲು ಸೇರಿದಂತೆ ಇತರೆ ಗ್ರಾಮಗಳಲ್ಲಿರುವ ಕೆರೆಗಳಲ್ಲಿ ರೈತರು ಹೂಳು ತೆಗೆದು ತಮ್ಮ ಜಮೀನುಗಳಿಗೆ ಕೆರೆ ಗೋಡು ಮಣ್ಣನ್ನು ಹೊಡೆದುಕೊಳ್ಳುತ್ತಿದ್ದಾರೆ. ಆದರೆ, ಕಾಡುಕೊತ್ತನಹಳ್ಳಿ ಕೆರೆ ರೈತರು ಹೂಳನ್ನು ತೆಗೆಯಲು ಮುಂದಾದಾಗ ರೈತರನ್ನು ಪಿಡಿಒ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಕೆರೆ ಹೂಳು ತುಂಬಿಕೊಂಡು ನೀರು ಸಂಗ್ರಹಣಾ ಸಾಮರ್ಥ್ಯ ಕಳೆದುಕೊಂಡಿದೆ. ಪ್ರಸ್ತುತ ಬರಗಾಲ ಆವರಿಸಿದೆ. ಕೆರೆಯಲ್ಲಿ ನೀರಿಲ್ಲದ ಅಂತರ್ಜಲದ ಕುಸಿತವಾಗಿದೆ.