• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • mandya

mandya

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಮಹಾ ಶಿವರಾತ್ರಿ: ಶಿವನ ದೇಗುಲಗಳಲ್ಲಿ ಪೂಜೆ, ಬಿಲ್ವಪತ್ರೆ ಸಮರ್ಪಣೆ
ಬಾಬುರಾಯನಕೊಪ್ಪಲು ಗ್ರಾಮದ ಬಳಿ ಕಾವೇರಿ ನದಿ ತೀರದಲ್ಲಿರುವ ಶ್ರೀಕಾಶಿ ವಿಶ್ವನಾಥ ದೇವಾಲಯ, ಗೋಸಾಯಿಘಾಟ್‌ನ ಕಾಶಿ ವಿಶ್ವೇಶ್ವರ, ಬಲಮುರಿಯ ಅಗಸ್ತೇಶ್ವರ, ಚಂದ್ರವನದ ಶ್ರೀಚಂದ್ರಮೌಳೇಶ್ವರ, ಪಟ್ಟಣದ ಶ್ರೀಗಂಗಾದರೇಶ್ವರ ಸ್ವಾಮಿ ದೇಗುಲ, ಪಾತಾಳೇಶ್ವರ ದೇಗುಲ, ಮರಳಾಗಾಲ ಮರಡಿಲಿಂಗೇಶ್ವರ ದೇಗುಲ, ಅಲ್ಲಾಪಟ್ಟಣದ ಶ್ರೀಬೀರೇಶ್ವರ ದೇವಾಲಯ ಸೇರಿದಂತೆ ವಿವಿಧೆಡೆ ನಡೆದ ವಿಶೇಷ ಪೂಜೆಗಳು.
ಮಹಾಶಿವರಾತ್ರಿ: ಜಿಲ್ಲಾದ್ಯಂತ ಶಿವಾಲಯಗಳಲ್ಲಿ ‘ಶಿವ ನಾಮಸ್ಮರಣೆ’
ಮಹಾಶಿವರಾತ್ರಿ ಪ್ರಯುಕ್ತ ಮಂಡ್ಯದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದ ಪ್ರಾಯೋಜಕತ್ವದಲ್ಲಿ ೨೧ ಅಡಿ ಎತ್ತರದ ರುದ್ರಾಕ್ಷಿ ಶಿವಲಿಂಗ ಮತ್ತು ನಂದಿ ನಗರದ ಪ್ರಮುಖ ಆಕರ್ಷಣೆಯಾಗಿತ್ತು. ಜಿಲ್ಲೆಯ ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ನಿರ್ಮಿಸಲಾಗಿರುವ ೨೧ ಅಡಿ ಎತ್ತರದ ಶಿವಲಿಂಗವು ೩.೫೦ ಲಕ್ಷ ರುದ್ರಾಕ್ಷಿ ಮಣಿಯಿಂದ ಸುತ್ತುವರಿದಿದೆ. ಜೊತೆಗೆ ಹೋಲೋಗ್ರಾಮ್ ಶಿವಲಿಂಗ ಹಾಗೂ ಸಹಸ್ರ ಶಿವಲಿಂಗಗಳ ಉಚಿತ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಡಾ.ಎಚ್.ಎನ್.ರವೀಂದ್ರರದ್ದು ನಿಂತಲ್ಲಿ ನೆಲೆ ಕಾಣದ ವ್ಯಕ್ತಿತ್ವ: ಆರೋಪ
ಕಳೆದ ಸ್ವಾಭಿಮಾನಿ ಚುನಾವಣೆಯಲ್ಲಿ ಹಲವು ನಾಯಕರು ಸುಮಲತಾರವರ ಬಗ್ಗೆ ಮಾತನಾಡಿದಾಗ ನನ್ನ ಅಣ್ಣ ನನ್ನ ಅಂಬಿ, ನನ್ನ ಜಿಲ್ಲೆ ನನ್ನ ಅತ್ತಿಗೆ, ನನ್ನ ತಮ್ಮ ಅಭಿಷೇಕ್, ನನ್ನ ಸ್ವಾಭಿಮಾನಿ ಜಿಲ್ಲೆಯ ಸೊಸೆಯಾದ ಸುಮಲತಾ ಎಂತಲೇ ಮಾತನಾಡಿ ಈಗ ಯಾರನ್ನೋ ಮೆಚ್ಚಿಸಲು ಸುಮಲತಾರವರ ಬಗ್ಗೆ ಅಸಭ್ಯ, ಅತಿರೇಕದ ಮಾತುಗಳನ್ನಾಡಿರುವುದನ್ನು ಉಗ್ರವಾಗಿ ಖಂಡಿಸುತ್ತೇನೆ.
ಮತದಾರರಿಗೆ ನೀಡಿದ್ದ ಭರವಸೆ ಈಡೇರಿಸುವೆ: ಶಾಸಕ ಪಿ.ಎಂ.ನರೇಂದ್ರಸ್ವಾಮಿ
‘ಯತ್ತಂಬಾಡಿ ಗ್ರಾಮದಲ್ಲಿ ಶ್ರೀಕಾಳೇಶ್ವರಸ್ವಾಮಿ ದೇವಾಲಯದ ಬಳಿ ಸಮುದಾಯ ಭವನ ಮತ್ತು ಬಾಣಸಮುದ್ರ ಗ್ರಾಮದಲ್ಲಿ ಬೆಂಗಳೂರಯ್ಯ ದೇವಾಲಯದ ಬಳಿ ಸಮುದಾಯ ಭವನ ನಿರ್ಮಾಣ ಮಾಡುವುದಾಗಿ ಚುನಾವಣೆಯಲ್ಲಿ ಭರವಸೆ ನೀಡಿದ್ದು, ಕೊಟ್ಟ ಮಾತಿನಂತೆ ಮುಂದಿನ ದಿನಗಳಲ್ಲಿ ಅನುದಾನ ನೀಡುತ್ತೇನೆ.’
ಮಹಾ ಶಿವರಾತ್ರಿ: ಕೆ.ಆರ್.ಪೇಟೆ ತಾಲೂಕಿನಾದ್ಯಂತ ಶಿವನಿಗೆ ವಿಶೇಷ ಪೂಜೆ
ಕೆ.ಆರ್.ಪೇಟೆ ಪಟ್ಟಣದ ಭ್ರಮರಾಂಭ ಮಲ್ಲಿಕಾರ್ಜುನ ದೇವಾಲಯದಲ್ಲಿ ದೇವಾಲಯದ ಆವರಣದಲ್ಲಿ ಸ್ಥಾಪಿಸಿದ್ದ ಲಿಂಗಕ್ಕೆ ಭಕ್ತರಿಂದ ಅಭಿಷೇಕ, ರುದ್ರಹೋಮ, ಪೂಣಾಹುತಿ, ಮಹಾ ಮಂಗಳಾರತಿ ನಡೆದವು. ವಿವಿಧ ಪೂಜೆ ಹಾಗೂ ಕು.ನಿತ್ಯ ಅವರಿಂದ ಭರತನಾಟ್ಯ ಏರ್ಪಡಿಸಲಾಗಿತ್ತು.
ಮಹಾ ಶಿವರಾತ್ರಿ: ಆದಿಚುಂಚನಗಿರಿಯಲ್ಲಿ ಪೂಜೆ ಪುನಸ್ಕಾರ, ಅಖಂಡ ಭಜನೆ ಕಾರ್ಯಕ್ರಮ
ಅಖಂಡ ಭಜನೆಗೆ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಚಾಲನೆ ನೀಡಿದರು. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಜಾನಪದ ಕಲಾವಿದರು, ಶ್ರೀಮಠದ ಸಾಧು ಸಂತರು, ವಿದ್ಯಾರ್ಥಿಗಳು, ಭಕ್ತರು ಭಜನೆಯಲ್ಲಿ ಭಾಗವಹಿಸಿದ್ದರು. ಕ್ಷೇತ್ರದಲ್ಲಿ ರಾತ್ರಿಯಿಡೀ ಅಖಂಡ ಭಜನೆ, ಶಿವನಾಮ ಸ್ಮರಣೆ ನಡೆದವು. ಶ್ರೀಮಠದ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ ಸೇರಿದಂತೆ ಸಾವಿರಾರು ಭಕ್ತಾದಿಗಳು ಹಾಜರಿದ್ದು ಕಲಾವಿದರನ್ನು ಪ್ರೋತ್ಸಾಹಿಸಿದರು.
ಮದ್ದೂರಿನಲ್ಲಿ ಶಿವನ ದೇಗುಲಗಳಲ್ಲಿ ಶ್ರದ್ಧಾಭಕ್ತಿಯಿಂದ ಪೂಜೆ ಸಲ್ಲಿಕೆ
ಪುರಾಣ ಪ್ರಸಿದ್ಧ ವೈದ್ಯನಾಥಪುರದ ಶ್ರೀವೈದ್ಯನಾಥೇಶ್ವರ ದೇಗುಲದಲ್ಲಿ ರುದ್ರ ಹೋಮ. ರುದ್ರಾಭಿಷೇಕ ದೊಂದಿಗೆ ಮಹಾ ಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ, ಮಳವಳ್ಳಿ ರಸ್ತೆಯ ಶ್ರೀವಿಶ್ವನಾಥ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ, ಬೆಳಗ್ಗೆ 6 ಗಂಟೆಯಿಂದ ಮಹಾ ಗಣಪತಿ ಹೋಮ. ನವಗ್ರಹ ಹೋಮ ಹಾಗೂ ಮೃತ್ಯುಂಜಯ ಹೋಮ ನೆರವೇರಿಸಲಾಯಿತು.
ಮುಖ್ಯಮಂತ್ರಿ ಹುದ್ದೆಗೆ ಯಾವ ಜಾತಿ, ಕುಲದ ಮಾನದಂಡವಲ್ಲ: ಶಾಸಕ ಕೆ.ಎಂ.ಉದಯ್
ಮುಖ್ಯಮಂತ್ರಿ ಬ್ರಾಹ್ಮಣ, ಲಿಂಗಾಯಿತ, ಒಕ್ಕಲಿಗ ಮಾತ್ರವೇ ಆಗಬೇಕೆಂಬ ನಿಯಮವಿಲ್ಲ. ಒಂದು ವೇಳೆ ದಲಿತರಿಗೆ ಅವಕಾಶ ಸಿಕ್ಕರೆ ಅವರೇ ಮುಖ್ಯಮಂತ್ರಿ ಆಗಲಿ. ಇದಕ್ಕೆ ನನ್ನ ಆಕ್ಷೇಪವಿಲ್ಲ. ಸದ್ಯಕ್ಕೆ ಮುಖ್ಯಮಂತ್ರಿ ಯಾಗಿ ಸಿದ್ದರಾಮಯ್ಯ ಇದ್ದಾರೆ. ಹೀಗಾಗಿ ಮುಖ್ಯಮಂತ್ರಿ ಖುರ್ಚಿ ಖಾಲಿ ಇಲ್ಲ.
ಹರಳಕೆರೆ ಶ್ರೀಸೀತಾಪತಿ ದೇವಸ್ಥಾನದ ಜಾತ್ರಾ ಮಹೋತ್ಸವ, ಧೂಪಸೇವೆ
ಸೀತಾಪತಿ ದೇವರಿಗೆ ಹೂ ಹಣ್ಣು, ತೆಂಗಿನಕಾಯಿ, ಊದುಬತ್ತಿಯ ಪೂಜೆ ಪುರಸ್ಕಾರಗಳಿಲ್ಲದ ಕಾರಣ ಸಾಮ್ರಾಣಿ ಹಾಗೂ ಕರ್ಪೂರವನ್ನೇ ಅಧಿಕ ಪ್ರಮಾಣದಲ್ಲಿ ಹರಕೆ ರೂಪದಲ್ಲಿ ಅರ್ಪಿಸಿದ ಭಕ್ತರು, ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ದೇವರಲ್ಲಿ ಪ್ರಾರ್ಥಿಸಿದರು. ಮಧ್ಯಾಹ್ನ 1.30ಕ್ಕೆ ಧೂಪದ ರಾಶಿಗೆ ಅಗ್ನಿಸ್ಪರ್ಷ ಮಾಡಿದ ನಂತರ ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ನಡೆಯಿತು.
20 ಸಾವಿರ ಲಂಚಕ್ಕೆ ಬೇಡಿಕೆ: ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಗ್ರಾಮ ಲೆಕ್ಕಧಿಕಾರಿ

ಜಮೀನಿನ ಖಾತೆ ಮಾಡಿಕೊಡುವ ಸಂಬಂಧ ರೈತರಿಂದ 20 ಸಾವಿರ ರು. ಲಂಚಕ್ಕೆ ಬೇಡಿಕೆಯಿಟ್ಟಿದ್ದ ಗ್ರಾಮ ಲೆಕ್ಕಾಧಿಕಾರಿ ಗುರುವಾರ ಮಧ್ಯಾಹ್ನ ತಾಲೂಕಿನ ಹೊಣಕೆರೆ ನಾಡಕಚೇರಿಯಲ್ಲಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.

  • < previous
  • 1
  • ...
  • 722
  • 723
  • 724
  • 725
  • 726
  • 727
  • 728
  • 729
  • 730
  • ...
  • 816
  • next >
Top Stories
ಎಸ್‌ಐಟಿ ಬಳಿ ಬುರುಡೆ ಗ್ಯಾಂಗ್‌ ಜಾತಕ ಬಿಚ್ಚಿಟ್ಟ ಚಿನ್ನಯ್ಯ? ಪ್ಯಾಂಟ್‌ ಕೊಟ್ಟ ಪೊಲೀಸರು
ದಸರೆಗೆ ಬಾನು: ‘ಕೈ’ ನಾಯಕರ ಸಮರ್ಥನೆ
ದಲಿತ ಸಿಎಂ ಪರ ಪರಂ ಕೂಗು
ಡಿಸಿಎಂ ಮಧ್ಯರಾತ್ರಿ ಸಿಟಿರೌಂಡ್ಸ್‌ : ನಗರದಲ್ಲಿ ರಸ್ತೆ ಗುಂಡಿ ಮುಚ್ಚುವ ಕಾಮಗಾರಿ ಪರಿಶೀಲಿಸಿದ ಡಿ.ಕೆ.ಶಿವಕುಮಾರ್‌
ಸೆ.1ಕ್ಕೆ ಧರ್ಮಸ್ಥಳ ಚಲೋ, ಸಮಾವೇಶ : ವಿಜಯೇಂದ್ರ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved