ಪ್ರಜಾಪ್ರಭುತ್ವಕ್ಕೆ ನಾಂದಿ ಹಾಡಿದ ಕೀರ್ತಿ ವಿಶ್ವಗುರು ಬಸವಣ್ಣ: ದೊಡ್ಡಯ್ಯಪ್ರತಿಯೊಬ್ಬರನ್ನು ಸಮಾನಾಗಿ ಕಾಣಬೇಕೆಂದು ಮೇಲುಕೀಳಿನ ವಿರುದ್ಧ ಹೋರಾಟ ಮಾಡಿದ ಬಸವಣ್ಣನವರ ತತ್ವ, ಅದರ್ಶಗಳನ್ನು ಪಾಲಿಸಬೇಕು. ಹಾಗೇ, ಬಸವ ಜಯಂತಿ ಕೇವಲ ಒಂದು ವರ್ಗಕ್ಕೆ ಮಾತ್ರ ಸೀಮಿತವಲ್ಲ. ಬದಲಾಗಿ ಎಲ್ಲ ಸಮುದಾಯಗಳ ಒಳಿತಿಗಾಗಿ ಹೋರಾಟ ನಡೆಸಿದ ಮಹಾನ್ ಚೇತನ. ಹೀಗಾಗಿ ಎಲ್ಲ ಸಮುದಾಯದವರು ಜಯಂತಿ ಆಚರಿಸಬೇಕು.