ಮಂಡ್ಯ ಕ್ಷೇತ್ರದಿಂದ ಮಾಜಿ ಸಿಎಂ ಕುಮಾರಸ್ವಾಮಿ ಅಭ್ಯರ್ಥಿ ಆಗಬೇಕು: ಡಾ.ಕೆ.ಅನ್ನದಾನಿಜೆಡಿಎಸ್ ನಮ್ಮ ನಿಷ್ಠೆಯನ್ನು ಪರಿಗಣಿಸಿ ಅಧಿಕಾರ ಕೊಟ್ಟಿದೆ. ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷಕ್ಕಾಗಿ ದುಡಿಯುತ್ತೇನೆ. ಇಷ್ಟೊಂದು ಪ್ರೀತಿ, ವಿಶ್ವಾಸ ತೋರಿಸಿರುವ ಕಾರ್ಯಕರ್ತರ ಋಣವನ್ನು ಎಂದಿಗೂ ತೀರಿಸಲು ಸಾಧ್ಯವಾಗದು. ನಮ್ಮನ್ನು ಬೆಳೆಸುವವರು, ಬೈಯುವವರು, ಸನ್ಮಾನಿಸುವವರು ಕಾರ್ಯಕರ್ತರೇ ಆಗಿರುವುದರಿಂದ ಅವರ ಭಾವನೆಗೆ ಧಕ್ಕೆ ತರುವಂತಹ ಕೆಲಸ ಎಂದಿಗೂ ಮಾಡುವುದಿಲ್ಲ.