ತಿರುಮಕೂಡಲು ನರಸೀಪುರದಲ್ಲಿ ಫೆ.10ರಿಂದ ಕುಂಭಮೇಳದಕ್ಷಿಣ ಭಾರತದಲ್ಲಿಯೂ ಮಹಾ ಕುಂಭಮೇಳ ನಡೆಯಬೇಕು ಎಂಬ ಆಶಯದೊಡನೆ 1989ರಿಂದ ಧಾರ್ಮಿಕ ಕಾರ್ಯಕ್ರಮ ಆರಂಭವಾಯಿತು. ಪ್ರತಿ 3 ವರ್ಷಗಳಿಗೊಮ್ಮೆ ಈ ಕುಂಭಮೇಳ ನಡೆಯುತ್ತಿದ್ದು, ಕಳೆದ ಬಾರಿ 2019 ರಲ್ಲಿಯೂ ನಡೆದಿತ್ತು. ಕೋವಿಡ್ ಕಾರಣದಿಂದ ಆ ನಂತರ ನಡೆಯಲಿಲ್ಲ. ಈಗ ಮುಂದಿನ ವರ್ಷ ಜರುಗುವುದು 12ನೇ ಮಹಾಕುಂಭಮೇಳ.