ಇಂದಿರಾ ಗಾಂಧಿ ವೈಚಾರಿಕ ಗಟ್ಟಿತನ ಇಂದಿನ ಯುವ ರಾಜಕಾರಣಿಗಳಿಗೆ ಆದರ್ಶ: ತೇಜಸ್ವಿನಿ ಗೌಡಭಾರತದ ಹಿತಕ್ಕೆ ಏನೇನು ಬೇಕಾಗಿತ್ತು ಅದನ್ನು ಅನುಷ್ಠಾನಕ್ಕೆ ತಂದವರು ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿ. ದೇಶ ವಿಭಜನೆಯಾದಾಗ ಆಹಾರದ ಕೊರತೆ ಇತ್ತು. ಕಿತ್ತು ತಿನ್ನುವ ಬಡತನ. ಭೀಕರವಾದ ಬರಗಾಲದಿಂದ ದೇಶ ನಲುಗಿತ್ತು. ಭಾಷವಾರು ಪ್ರಾಂತ್ಯಗಳ ರಚನೆಯ ಸಮಸ್ಯೆ ಇತ್ಯರ್ಥಪಡಿಸುವ ಮತ್ತು ನೆರೆಯ ದೇಶಗಳಿಂದ ಯುದ್ಧದ ಭೀತಿಯಿತ್ತು. ಈ ಸಮಸ್ಯೆಯನ್ನು ಗಾಂಧಿ ಕುಟುಂಬ ಯಶಸ್ವಿಯಾಗಿ ನಿಭಾಯಿಸಿತು.